ಅಮೂಲ್ಯವಾದ ಕಾಣಿಕೆ ತನ್ನಿರಿ
Amoolyavaada kaanike tanniri
ಯೆಹೋವ ಸನ್ನಿಧಿಗೆ
Yehova sannidhige
ಆತನ ಪಾದಕ್ಕೆ ಅಡ್ಡಬಿದ್ದು
Aatana paadakke addabiddu
ಸ್ತೋತ್ರ ಮಾಡಿ ಸ್ತೋತ್ರ ಮಾಡಿ
stotra maadi stotra maadi
ಸಮರ್ಪಿಸುವಾ ಕಾಣಿಕೆ
Samarpisuvaa kaanike

ಕಾಣಿಕೆ ಕಾಣಿಕೆ 
Kaanike kaanike
ಆಶೀರ್ವದಿಸು ನಮ್ಮ ಕಾಣಿಕೆ
Aasheervadisu namma kaanike
ಕಾಣಿಕೆ ಕಾಣಿಕೆ
Kaanike kaanike
ಸ್ವೀಕರಿಸು ನಮ್ಮ ಕಾಣಿಕೆ
sweekarisu namma kaanike

ಹತ್ತರಲ್ಲಿ ಒಂದು ಪಾಲನ್ನು 
Hattaralli ondu paalannu
ಅಬ್ರಹಾಮ ದೇವರಿಗೆ ಕೊಟ್ಟನು
Abrahama devarige kottanu
ಹಾಲು ಜೇನು ಹರಿಯುವ ದೇಶ
Haalu jenu hariyuva desha
 ತನ್ನ ಸಂತತಿಗೆ ಕೊಟ್ಟನು
 tanna santatige kottanu

ಬೆಲೆಯ ಪ್ರಥಮ ಫಲದಿಂದ 
Beleya prathama phaladinda
ಯೆಹೋವನನ್ನು ಸನ್ಮಾನಿಸು
 Yehovannu sanmaanisu
ನಿನ್ನ ಪೈರು ಸಮೃದ್ಧಿ ಮಾಡಿ 
Ninna pairu samruddhi maadi
ನುಂಗುವ ಹುಳದಿಂದ ತಪ್ಪಿಸುವನು
 nunguva huladinda tappisuvanu

ದೇವರ ಆಜ್ಞೆ ಕೈಗೊಳ್ಳುವವರೇ
Devara aajne kaigolluvavare
ಆತನ ಹಿಂಬಲ ಮುಂಬಲಾಗುವನು
aatana himbala mumbalaaguvanu
ಪರಲೋಕ ತೆರೆದು ಸುವರವ ಸುರಿಸಿ
Paraloka teredu suvarava surisi
ನಿನ್ನ ಕಣಜವ ತುಂಬಿಸುವನು
ninna kanajava tumbisuvanu